ಇಂದ್ರಸಿಂಗ್ ರಾಠೋರ್-
ಔರಂಗಜೇಬನಿಗೆ ಅಧೀನನಾಗಿ, ಸಾಮ್ರಾಜ್ಯದ ವಾಯವ್ಯ ಸರಹದ್ದಿನ ರಕ್ಷಣೆ ವಹಿಸಿದ್ದ ಮಾರವಾಡದ ಯಶವಂತ್‍ಸಿಂಗ್ 1678ರಲ್ಲಿ ಕಾಲವಾದ ಮೇಲೆ, ಅವನ ರಾಜ್ಯಕ್ಕೆ ದೊರೆಯಾಗಿ ಬಂದ. ಇಡೀ ದೇಶವನ್ನೇ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಬೇಕೆಂಬ ಉದ್ದೇಶದಿಂದ ಔರಂಗಜೆóೀಬ ದೇಶದ ಅನೇಕ ಮುಖ್ಯ ಹುದ್ದೆಗಳಿಗೆ ಮುಸಲ್ಮಾನರನ್ನು ನೇಮಿಸುತ್ತಿದ್ದನಾದ ಕಾರಣ ಯಶವಂತನಿಗೆ ದೂರಸಂಬಂಧಿಯಾಗಿದ್ದ ಇವನ ಉತ್ತರಾಧಿಕಾರವನ್ನೊಪ್ಪಲು ಔರಂಗಜೇಬನಿಗೆ ಮೂವತ್ತಾರು ಲಕ್ಷ ಹಣ ಕೊಡಬೇಕಾಯಿತು. ಇಂದ್ರಸಿಂಗ್ ಮೊಗಲ್ ಸಾಮ್ರಾಟನ ಅಡಿಯಾಳಾಗಿರಬೇಕಾಯಿತು. ಈ ಪರಿಸ್ಥಿತಿ ಮಾರವಾಡದ ರಾಠೋರ್ ರಜಪೂತರನ್ನು ಕೆರಳಿಸಿತು. ದುರ್ಗಾದಾಸನ ಸ್ವಾತಂತ್ರ್ಯ ಸಮರಕ್ಕೆ ಎಡೆಮಾಡಿಕೊಟ್ಟಿತು. 		(ನೋಡಿ- ದುರ್ಗಾದಾಸ್-1)		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ